ವಿಷಯದ ವಿವರಗಳಿಗೆ ದಾಟಿರಿ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ -ಕೃಷ್ಣಾಪುರದೊಡ್ಡಿ

ತಂದೆಯಿಂದಲೇ  ಪ್ರೇರಣೆ ಪಡೆದ ಅವರ ಮಗ ಬೈರೇಗೌಡ, ಮುದ್ದಪ್ಪನವರ  ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿದರು. ಇದು ಸಾರ್ವಜನಿಕರಿಂದ  ಅಥವಾ ಸರ್ಕಾರ ಇಲ್ಲವೆ ವಿದೇಶಿ ಸಂಸ್ಥೆಗಳಿಂದ ಅನುದಾನ ಪಡೆದು ನಡೆಸಲ್ಪಡುತ್ತಿರುವ ಸಂಸ್ಥೆ ಅಲ್ಲ. ಬೈರೇಗೌಡ ತಾವು ತಮ್ಮ ಪತ್ನಿ ಇಬ್ಬರ ತಿಂಗಳ ಸಂಬಳದಲ್ಲಿ ಒಂದಿಷ್ಟು ಭಾಗ ಸಮಾಜದ್ದು ಎಂದು ತೀರ್ಮಾನಿಸಿ ಕಾರ್ಯಪ್ರವೃತ್ತರಾದರು. ತನ್ನೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಓದಿಗೆ ಸಣ್ಣ ಸಹಾಯ ಮಾಡುವ ಮೂಲಕ ಟ್ರಸ್ಟ್ ಕಾರ್ಯಾರಂಭಿಸಿತು. ರಾಮನಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಏಳು ಪ್ರೌಢಶಾಲೆಗಳಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಉಪನ್ಯಾಸ ಮಾಲಿಕೆಯ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನ ಕರ್ತವ್ಯ, ಅದರ ಅವಶ್ಯಕತೆಯನ್ನು ಮನಗಾಣಿಸಿತು.

ರಾಮನಗರ,  ಮಾಗಡಿ, ಕನಕಪುರ ಮತ್ತು ಬೆಂಗಳೂರು ನಗರವೂ ಸೇರಿದಂತೆ 52 ಸರ್ಕಾರಿ ಅರೆಸರ್ಕಾರಿ ಪ್ರಾಥಮಿಕ,ಪ್ರೌಢಶಾಲೆಗಳಿಗೆ ಸುಮಾರು ಎರಡೂವರೆ ಲಕ್ಷ ರೂಪಾಯಿಗಳ ಪುಸ್ತಕಗಳನ್ನು ವಿತರಿಸಿ ಜ್ಞಾನ ಪ್ರಸಾರದಲ್ಲಿ ತೊಡಗಿತು.

ಮಕ್ಕಳಿಗಾಗಿ ಜಾನಪದ ರಂಗಭೂಮಿಯನ್ನು ಪರಿಚಯಿಸಲು ಚಿಣ್ಣರ ಲೋಕವೆಂಬ ರಂಗತರಬೇತಿ ಶಿಬಿರವನ್ನು ಆಯೋಜಿಸಲು ಆರಂಭಿಸಿತು. ಬುಡಕಟ್ಟು ಹಾಡಿ, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಮಕ್ಕಳನ್ನು ಶಿಬಿರಕ್ಕೆ ಆಯ್ಕೆ ಮಾಡಿಕೊಂಡು ಇತರೆ ಸಂಘಸಂಸ್ಥೆಗಳ ಸಹಯೋಗದಲ್ಲಿ ಉಚಿತ ವಸತಿ ರಂಗತರಬೇತಿ ಶಿಬಿರಗಳನ್ನು ಏರ್ಪಡಿತು. ಇದರುವರೆಗೆ ಆ ಬಗೆಯ ಏಳು ಶಿಬಿರಗಳು ನಡೆದಿವೆ. ಅನೇಕ ರಂಗಗೆಳೆಯರು, ಹಿರಿತೆರೆ-ಕಿರುತೆರೆ ನಟ-ನಟಿಯರು, ತಂತ್ರಜ್ಞರನ್ನು ಕರೆಸಿ ಅವರೊಡನೆ ಸಂವಾದ ನಡೆಸುವ ಮೂಲಕ ಮಕ್ಕಳ ಮನೋಲೋಕವನ್ನು ಬೆಳಗಿಸಿದ ಕೀರ್ತೀ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ಗಿದೆ.

ಅಜ್ಞಾತ  ಕಲಾವಿದರ ಶೋಧದಲ್ಲಿ, ಪ್ರಚಾರಕ್ಕೆ ಬಾರದ, ಪ್ರತಿಭಾವಂತರನ್ನು ಕರೆದು ಗೌರವಿಸುವ ಮೂಲಕ ಜವಾಬ್ದಾರಿ ನಿರ್ವಹಿಸುತ್ತಿದೆ. ಜಾನಪದ ಗೀತೆಗಳ ಕಲಿಕೆಯಲ್ಲಿ ಆಸಕ್ತರನ್ನು ಕಲೆಹಾಕಿ, ಮೂಲ ಗಾಯಕರನ್ನು ಕರೆಸಿ ಅನೇಕ ಜಾನಪದ ಗೀತಗಾಯನ ಶಿಬಿರಗಳಲ್ಲಿ ತರಬೇತಿ ನೀಡುತ್ತಿದೆ.

ಮಕ್ಕಳ ಮನೋವಿಕಾಸವಾದರೆ ಸಮಾಜದ ಸ್ವಾಸ್ಥ್ಯ ಸರಿದಾರಿಯಲ್ಲಿರುತ್ತದೆ ಎಂಬುದು ಟ್ರಸ್ಟ್ನ ಅಚಲ ನಂಬಿಕೆ. ಸಿರಿವಂತರ ಮನೆಯಲ್ಲಿ ದುಡಿದು, ಶಾಲೆಗೆ ಬರುವ 36 ಹೆಣ್ಣುಮಕ್ಕಳ ಕಲಿಕೆಗೆ ತೊಡಕಾಗದಂತೆ ರಂಗತರಬೇತಿ ನೀಡಿ `ಬುಡಬೆಳ್ಳಿ, ನಡುಪಚ್ಚೆ ಗೊನೆಮುತ್ತು ಎಂಬ ನಾಟಕದ ಮೂಲಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ

ಪ್ರತಿಭೆ ಪ್ರದಶರ್ಿಸಿ ರಂಗಾಸಕ್ತರ ಗಮನ ಸೆಳೆಯುವಂತೆ ಮಾಡಿದ್ದು ಟ್ರಸ್ಟ್ನ ಹೆಗ್ಗಳಿಕೆ.

`ಗಡಗದಲೆ  ಗಂಗಾಧರ ಶಾಸ್ತ್ರಿ, `ಸೋರೇ ಬುರುಡೆ, `ಹಂದೀಪುರಾಣ, `ಎಲೆನಕ್ಕು ಅಡಿಕೆ ಮಾತಾಡಿ ಸುಣ್ಣ ಕುಣಿದಾಗ, `ಕಿಲಾಡಿ ದಾಸಯ್ಯ, `ಪಂಚವರ್ಣದ ಗಿಣಿ, `ಜಾಲ-ಮಾಜರ್ಾಲ, `ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು, `ಹೆಬ್ಬಾಲ ಮುಂತಾದ ಹನ್ನೊಂದು ಮಕ್ಕಳ ನಾಟಕಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ತರಬೇತಿ ಕೊಡಿಸಿ ನಗರದ ರವೀಂದ್ರ ಕಲಾಕ್ಷೇತ್ರ ಹಾಗೂ ಕನರ್ಾಟಕದ ಬೇರೆ ಬೇರೆ ನಗರಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ.

ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಆವರಣದಲ್ಲೇ  ಗಿರಕಿ ಹೊಡೆಯುವ ಕಿಲಾಡಿ ಕಲಾವಿದರನ್ನು  ಹೊರತುಪಡಿಸಿ, ಸಾವಿರಾರು ಜಾನಪದ ಕಲಾವಿದರನ್ನ  ನಾಡಿನಾದ್ಯಂತ ಗುರುತಿಸಿ ಅವರಿಂದ  ಪ್ರದರ್ಶನಗಳನ್ನು  ಏರ್ಪಡಿಸುವ ದಿಸೆಯಲ್ಲಿ ಟ್ರಸ್ಟ್ನ ಪ್ರಯತ್ನ  ಶ್ಲಾಘನೀಯ. ಕಳೆದ ಹನ್ನೊಂದು ವರ್ಷಗಳಿಂದ ಸುಮಾರು 700ಕ್ಕೂ ಹೆಚ್ಚು ಕಲಾವಿದರು ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ವಿವಿಧ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜಾನಪದ  ಕಥಾಚಿತ್ರ ಸ್ಪರ್ಧೆ ಟ್ರಸ್ಟ್ನ ಮತ್ತೊಂದು  ಹೊಸ ಆಲೋಚನೆ. ಪ್ರಾಥಮಿಕ, ಮಾಧ್ಯಮಿಕ  ಮತ್ತು ಪ್ರೌಢಶಾಲಾ ಮಕ್ಕಳು ಪಾಲ್ಗೊಳ್ಳುತ್ತಾರೆ. ಜಾನಪದ ಕತೆ ಕೇಳಿ, ಒಂದು ಸನ್ನಿವೇಶ ಚಿತ್ರಿಸಲು ತಿಳಿಸಲಾಗುವುದು. ಸಾವಿರಾರು ಮಕ್ಕಳು ಪಾಲ್ಗೊಂಡಿರುವುದು ಗಮನಾರ್ಹ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ ಕಳೆದ  ಮೂರೂವರೆ ವರ್ಷಗಳಿಂದ  ಹಂಪಿನಗರದ  ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣದಲ್ಲಿ  ಪ್ರತಿ ತಿಂಗಳ ಹನ್ನೊಂದರಂದು ನಡೆಯುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಟ್ರಸ್ಟ್ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬಡಾವಣೆಗಳಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಆರಂಭವಾದ ಈ ಕಾರ್ಯಕ್ರಮ ಇದುವರೆಗೆ 42 ತಿಂಗಳುಗಳನ್ನು ಪೂರೈಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಒಗಟು ಬಿಡಿಸಿ  ಗಾದೆ ಹೇಳಿದವರಿಗೆ ಪುಸ್ತಕ ಬಹುಮಾನ,  ಶಿವಮೊಗ್ಗ ಸುಬ್ಬಣ್ಣ ಅವರಿಂದ ಸುಗಮ  ಸಂಗೀತ, ನಾಗಾಭರಣರ ಜೋಕುಮಾರಸ್ವಾಮಿ  ನಾಟಕ, ಸಿ. ಅಶ್ವತ್ಥ್ ಅವರ ಗೀತ ಗಾಯನ, ಡೊಳ್ಳಿನ ಗುಡುಗು-ಸೋಬಾನೆ ಬೆಡಗು, ಕರಪಾಲ  ಮೇಳ, ಲಂಬಾಣಿ ನೃತ್ಯ, ದಿ. ಬಾಲೇಖಾನರ ಸಿತಾರ್ ವಾದನ, ಯಕ್ಷ ದೇಗುಲದ ಯಕ್ಷಗಾನದ ಆಟ, ಕರ್ನಾಟಕ ದರ್ಶನ, ಸವಿತ ನುಗಡೋಣಿ ಅವರ ವಚನ ಗಾಯ, ಕೂಚುಪುಡಿ ನೃತ್ಯ, ಭರತನಾಟ್ಯ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಟ್ರಸ್ಟ್ನ ಪಟ್ಟಿ ಸೇರಿ ಅಲ್ಲಿ ಕಲಾರಸಿಕರ ಮನಸೂರೆಗೊಂಡಿದೆ.

ಕುಂಚಕಲಾಶಿಬಿರ, ಮಾಧ್ಯಮ ಪರಿಚಯ ಶಿಬಿರ, ಕಾಡ ಬೆಳದಿಂಗಳಲ್ಲಿ ಕವಿಗೋಷ್ಠಿ, ಬೆಟ್ಟದ ಕಿಬ್ಬಿಯ ಬೆಳದಿಂಗಳಲ್ಲಿ ಚರ್ಚೆಗೆ, ಹೀಗೆ ಹೊಸ ಹೊಸ ಪರಿಕಲ್ಪನೆಗಳನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಪರಿಚಯಿಸುತ್ತಿದೆ. ಪ್ರಸ್ತುತ ಪ್ರಕಟಣಾ ಕ್ಷೇತ್ರಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಈವರೆಗೆ ನಾಡಿನ ಹೆಸರಾಂತ ಲೇಖಕರ 80ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಡಾ. ಎಲ್. ಬಸವರಾಜು ಅವರ 12 ಕೃತಿಗಳು, ಮುಜಾಫರ್ ಅಸ್ಸಾದಿ ಮುಂತಾದವರ ಕೃತಿಗಳನ್ನು ಮುದ್ದುಶ್ರೀ ಗ್ರಂಥಮಾಲೆಯಲ್ಲಿ ಪ್ರಕಟಗೊಳಿಸಿದೆ.

No comments yet

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: