ವಿಷಯದ ವಿವರಗಳಿಗೆ ದಾಟಿರಿ

ಮುದ್ದುಶ್ರೀ ಉತ್ಸವ

The annual event of the organization, previously called ‘janapada Sanskruti  Utsava’ was renamed ‘Muddudhree  Utsava’ in 2008. It is a melting pot of cultural activities and theater events aimed at popularizing the vast heritage and preventing them from extinction.14

Friends in the theater circuit of Bangalore, have been of immense help in organizing the event and special thanks to them.

——————–

9

ಜಾನಪದ ಕಲೆ, ಸಾಹಿತ್ಯ, ರಂಗಸಂಸ್ಕೃತಿಗಳ ಪ್ರಚಾರ-ಪ್ರಸಾರ ಮುಖ್ಯ ಉದ್ದೇಶ. ಮುದ್ದುಶ್ರೀ ಉತ್ಸವ ಕೆ.ಎಸ್.ಎಂ.ಟ್ರಸ್ಟ್ ನ ವಾರ್ಷಿಕೋತ್ಸವವೂ ಹೌದು.

ಜಾನಪದ ಸಂಸ್ಕೃತಿ  ಉತ್ಸವ ಎಂಬ ಹೆಸರಿನಿಂದ ನಡೆಯುತ್ತಿದ್ದ ಈ ಉತ್ಸವಕ್ಕೆ ಕಳೆದ ವರ್ಷದಿಂದ ಮುದ್ದುಶ್ರೀ ಉತ್ಸವ ಎಂದು ಹೆಸರಿಡಲಾಗಿದೆ.

26

ಹನ್ನೊಂದು ವಸಂತಗಳನ್ನು ಪೂರೈಸುತ್ತಿರುವ  ಕೆ.ಎಸ್.ಎಂ. ಟ್ರಸ್ಟ್ ವಾರ್ಷಿಕೋತ್ಸವದ ಅಂಗವಾಗಿ

18ನೇ  ನವೆಂಬರ್ 2009ರ ಬೆಳಗ್ಗೆ 10.30ಕ್ಕೆ ಜಾನಪದ  ಕಥಾಚಿತ್ರ ಸ್ಪರ್ಧೆ

19 ನವೆಂಬರ್  2009ರ ಬೆಳಗ್ಗೆ 10.30ಕ್ಕೆ ಕರ್ನಾಟಕದ ಇಪ್ಪತ್ತು  ಯುವ ಕುಂಚಕ ಕಲಾವಿದರಿಗೆ ಕಲಾಶಿಬಿರ.

20 ನವೆಂಬರ್  2009ರ ಬೆಳಗ್ಗೆ  ಟ್ರಸ್ಟ್ನ ಇದುವರೆಗಿನ ಕಾರ್ಯಚಟುವಟಿಕೆಗಳ ಪ್ರದರ್ಶನ.

ಸಂಜೆ 4ಕ್ಕೆ ಜಾನಪದ ಕಲಾಮೇಳದಲ್ಲಿ ಸಾಗರದ ಸ್ಫೂತಿ ಮಹಿಳಾ ತಂಡದ ಗುಮಟೆ ಪಾಂಗು, ತಟ್ಟೇಗಡಿಯ ಮಾರಿಕಾಂಬ ಡೊಳ್ಳುಕಲಾವಿದರ ಡೊಳ್ಳು ಕುಣಿತ, ಚಾಮರಾಜನಗರ ಶಿವಮಲ್ಲು ತಂಡದ ಗೊರವರ ಕುಣಿತ, ಹುಳ್ಳೇನಹಳ್ಳಿಯ ಗಂಗಾಧರ್ ಮತ್ತು ತಂಡದ ವೀರಭದ್ರನ ಕುಣಿತ, ಕಾರಸವಾಡಿಯ ಅನಿಲ್ಕುಮಾರ್ ತಂಡದ ತಮಟೆ ಮೇಳ, ಕೆ.ಪಿ. ದೇವರಾಜ್ ತಂಡದ ಪೂಜಾಕುಣಿತ ಪ್ರದರ್ಶನವಿದೆ.

ಸಂಜೆ 6ಕ್ಕೆ ಕನ್ನಡದ ಹೆಸರಾಂತ ರಂಗಕರ್ಮಿ ಎಚ್.ಸಿ. ಜಯದೇವ್, ಸುಗಮ ಸಂಗೀತ ಕ್ಷೇತ್ರದ ಕೆ.ಎಸ್. ಸುರೇಖ, ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್, ಚಾಮರಾಜನಗರದ ದೀನಬಂಧು ಸಂಸ್ಥೆಯ ಸಂಸ್ಥಾಪಕ ಜಿ.ಎಸ್. ಜಯದೇವ್, ಕನಕಪುರ ತಾಲ್ಲೂಕಿನ ಕಾಡುಪ್ರತಿಭೆ ಕಂಚಿನ ಕಂಠದ ಕಾರಯ್ಯ ಇವರುಗಳನ್ನು ಗೌರವಿಸುತ್ತಿದೆ.

ಸಂಜೆ 7ಕ್ಕೆ ನಗರದ  ಹೆಸರಾಂತ ಬೆನಕ ರಂಗತಂಡದವರಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ತಬರನಕತೆ ನಾಟಕ ಪ್ರದರ್ಶನಗಳನ್ನು ಆಯೋಜಿಸಿದೆ.

ಕಲಾಕ್ಷೇತ್ರದ ಜಗಲಿಕಟ್ಟೆ ಗೆಳೆಯರು ಈ ಉತ್ಸವಕ್ಕೆ ಕೈ ಜೋಡಿಸಿದ್ದಾರೆಂಬುದು ಹೆಮ್ಮೆಯ ಸಂಗತಿ.

No comments yet

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: