Skip to content

ಕೆ.ಎಸ್. ಮುದ್ದಪ್ಪ

muddappa1

ಯಾರು ಈ ಕೆ.ಎಸ್. ಮುದ್ದಪ್ಪ

ಮುದ್ದಪ್ಪ  ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದವರಲ್ಲ; ಸರ್ಕಾರದ ಯಾವ ಹುದ್ದೆಯಲ್ಲೂ ಇರಲಿಲ್ಲ; ಶ್ರೀಮಂತ ಮನೆತನದವರಂತೂ ಅಲ್ಲವೇ ಅಲ್ಲ. ಬಡಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಮನುಷ್ಯ. ಆದರೆ ಅವರ ಸಾಮಾಜಿಕ ಕಳಕಳಿ ಆಲೋಚನೆಗೆ ಹಚ್ಚುವಂತಹದ್ದು.

ಪಶುವೈದ್ಯ, ಮನುಷ್ಯರ ಖಾಯಿಲೆಗಳಿಗೆ ನಯಾಪೈಸೆ ಕೇಳದೆ ಔಷಧಿ ಕೊಡುತ್ತಿದ್ದರು. ಮುರಿದ ಸಂಸಾರಗಳನ್ನು ಒಂದುಗೂಡಿಸಲು ಹಗಲು-ರಾತ್ರಿ ದುಡಿದರು. ಮೂಡಲಪಾಯ ಯಕ್ಷಗಾನಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಬಯಲು ಸೀಮೆಯ ಪೌರಾಣಿಕ ನಾಟಕಗಳ ನೂರಾರು ಪಾತ್ರಗಳಲ್ಲಿ ಸಾವಿರಾರು ಬಾರಿ ನಟಿಸಿದ್ದರು. ಮಹಾಭಾರತ, ರಾಮಾಯಣ ಮಹಾಕಾವ್ಯಗಳನ್ನು ಪ್ರವಚನ ಮಾಡಿ ಜನಸಾಮಾನ್ಯರಿಗೆ ಅದರ ಸವಿ ಉಣಿಸಿದವರು. ನೂರಾರು ಜನಪದ ಕತೆಗಳನ್ನು ಹೇಳುತ್ತಿದ್ದ ಮುದ್ದಪ್ಪ ಆ ಮೂಲಕ ದಾರಿತಪ್ಪಿದವರನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿದವರು.

ತಮ್ಮೊಡನೆ  ದುಡಿಯುತ್ತಿದ್ದ ಕೂಲಿ-ಕಾಮರ್ಿಕರಿಗೆ ತಮ್ಮ  ಮಕ್ಕಳ ಶಿಕ್ಷಣದ ಅವಶ್ಯಕತೆಯನ್ನು  ಮನವರಿಕೆ ಮಾಡಿಕೊಟ್ಟು, ಶಾಲೆಗೆ ಸೇರಿಸಿದ  ಪರಿಣಾಮ ತಾವೂ ಸಮಾಜದಲ್ಲಿ ಒಂದು ಸ್ಥಾನ ಪಡೆಯುವಂತಾಯಿತು ಎಂದು ಮುದ್ದಪ್ಪನವರನ್ನು ಇಂದಿಗೂ ಅನೇಕರು ಸ್ಮರಿಸಿಕೊಳ್ಳುತ್ತಾರೆ.

1940ರ ದಶಕದಲ್ಲಿಯೇ  ಸಾವಯವ ಕೃಷಿಯ ಮಹತ್ವವನ್ನು ಜನರಿಗೆ  ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಗುಂಡು ತೋಪುಗಳ ಅವಶ್ಯಕತೆಯನ್ನು  ವಿವರಿಸಿ ಪರಿಸರದ ಬಗೆಗೆ ವಿಶೇಷ ಕಾಳಜಿಯನ್ನು ಮೆರೆದವರು.

———————————-

A humanitarian, who dedicated his life for the betterment of the society, was born in Krishnapuradoddi, a village in Ramanagar district. He had mastered the rudiments of veterinary medicine. He Was a thespian who knew the nuances of various theater styles. Having embraced Mudalapaya Yakshagana form of theater through his life, he had a mastery of the Yakshagana rangas and aspired to proliferate the art form in every village. He advocated non-elaborate and simple marriages, and campaigned towards education for all. He decisively refused a government job offer to continue experimenting for better techniques in agriculture.

 

Advertisements
No comments yet

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: